ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಪಾಂಡುರಂಗ ವಿಠ್ಠಲ ಭಜನೆ ಕಾರ್ಯಕ್ರಮ
Date : 13-07-2025
ದಿನಾಂಕ:-13.07.2025 ರಂದು ಶ್ರೀಮಠದ ಕೈಲಾಸ ಮಂಟಪದಲ್ಲಿ ಪಾಂಡುರಂಗ ವಿಠ್ಠಲನ ಭಜನೆ ಹಾಗೂ ಭಕ್ತಿ ಗೀತೆಗಳ ಕಾರ್ಯಕ್ರಮ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಉದಯಕುಮಾರ ಡಿ. ನಾಯಕ, ಶ್ರೀಮತಿ ಗೀತಾ ಟಿ. ಕಲಬುರಗಿ ಹಾಗೂ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಎಸ್. ತುಪ್ಪದ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಅಪಾರ ಭಕ್ತ ಮಂಡಳಿ ಪಾಲ್ಗೊಂಡಿದ್ದರು.